ಸಿದ್ದಲಿಂಗಯ್ಯ ದಲಿತ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ದಲಿತ ಸಾಹಿತ್ಯ ಕುರಿತಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪದವಿ: ೧೯೭೬ ರಲ್ಲಿ ಕನ್ನಡದಲ್ಲಿ ಎಂ.ಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯ. == ವೃತ್ತಿ == ೧೯೮೧ ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭ. ೧೯೮೯ ರಲ್ಲಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ 'ಗ್ರಾಮದೇವತೆಗಳು' ಎಂಬ ವಿಷಯದ ಮೇಲೆ ಪಿಎಚ್ ಡಿ ಪದವಿ. ೧೯೯೨ ರಲ್ಲಿ ಪ್ರಾಧ್ಯಾಪಕರಾದರು. ೨೦೦೧-೨೦೦೩ರ ಅವಧಿಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿದ್ದರು. == ಕವನ ಸಂಕಲನಗಳು == ಹೊಲೆಮಾದಿಗರ ಹಾಡು(೧೯೭೫) ಸಾವಿರಾರು ನಾಡಿಗಳು(೧೯೭೯) ಕಪ್ಪು ಕಾಡಿನ ಹಾಡು(೧೯೮೨) ಆಯ್ದ ಕವಿತೆಗಳು(೧೯೯೭) ಮೆರವಣಿಗೆ(೨೦೦೦) ನನ್ನ ಜನಗಳು ಮತ್ತು ಇತರ ಕವಿತೆಗಳು(೨೦೦೫) == ನಾಟಕಗಳು == ಪಂಚಮ ಮತ್ತು ನೆಲಸಮ್ಮ(೧೯೮೦) ಏಕಲವ್ಯ(೧೯೮೬) == ವಿಮರ್ಶಾ ಗ್ರಂಥಗಳು == ಹಕ್ಕಿ ನೋಟ(೧೯೯೧) ಜನಸಂಸ್ಕೃತಿ(೨೦೦೭) == ಜೀವನ ಚರಿತ್ರೆ == ಊರುಕೇರಿ(೧೯೯೭) ಊರುಕೇರಿ ಭಾಗ ೨(೨೦೦೬) == ಪ್ರಬಂಧ == ಅವತಾರಗಳು(೧೯೮೧) ಶ್ರೀಯುತರು ಶ್ರವಣಬೆಳಗೊಳದಲ್ಲಿ ನಡೆಯುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಿದ್ದಲಿಂಗಯ್ಯ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. == ಬಾಹ್ಯ ಸಂಪರ್ಕಗಳು == ://..//9bandhayana/. ://../-/-/------/244070.